Monday, May 23, 2022

The flower

 

ಅಮೃತ ಘಳಿಗೆಯಲೊಮ್ಮೆ ನಾ ಭುವಿಗೆ ತಳೆದೊಂದು

ಬಿತ್ತು ತಾ ನಕ್ಕಿತ್ತು ಹೂವಾಗಿ ಬಿರಿದು

ಜನ ಹಳಿದರದನಂದು ಕಳೆಯೆಂದು ಬಗೆದು


ನನ್ನ ತೋಟದ ತಂಪಿನೆಡೆಯೆಲ್ಲ ಸುಳಿದಾಡಿ

ಗೊಣಗಿದರು ಏನೊ ಸರಿಯಿಲ್ಲೆಂದು ಜರಿದು

ನನ್ನನೂ ನನ್ನಲರನೂ ಶಪಿಸಿ ನಡೆದು


ದಿನಕಳೆದು ಮುಂದೆ ಬಾನೆತ್ತರಕೆ ತಾ ಬೆಳೆದು

ಬೇಲಿಯಾಚೆಗೆ ತೋರ್ವ ಬೆಳಕ ಶಿಖಿಯಾಯ್ತು

ಕಾಳರಾತ್ರಿಯ ಖಳರ ಕೈವಶವದಾಯ್ತು


ದೂರದೂರುಗಳಲ್ಲಿ ದಾರಿ ಕೇರಿಗಳಲ್ಲಿ

ಅದನು ಬಿತ್ತಿದರು ಕಂಡಲ್ಲೆಲ್ಲ ಎಲ್ಲೂ

ಮೊರೆವನಕ ವಾಹ್! ಎಂಥ ಹೂವೆಂಬ ಸೊಲ್ಲು


ಸುಸ್ಪಷ್ಟವೀ ನನ್ನ  ಪುಟ್ಟ ಕಥೆಯನು ಕೇಳಿ 

ಎಲ್ಲರೂ ಪಡೆದಿಹರು ಆ ಬಿತ್ತನೀಗ

ಹೂವುಗಳು ದೊರಕುವವು ಬೇಕೆನಿಸಿದಾಗ


ಹೀಗಿರಲು ಸೊಗವಿರುವ ಹಲ ಹೂಗಳರಳುವವು

ಕೆಲವು ಹೂವುಗಳಲೇನೊಂದು ಸೊಗವಿರದು 

ಕಳೆಯೆನ್ನುವರು ಮತ್ತೆ ಜನರು ಹೀಗಳೆದು


Original by Alfred, Lord Tennyson


Once in a golden hour

I cast to earth a seed.

Up there came a flower,

The people said, a weed.


To and fro they went

Thro' my garden bower,

And muttering discontent

Cursed me and my flower.


Then it grew so tall

It wore a crown of light,

But thieves from o'er the wall

Stole the seed by night.


Sow'd it far and wide

By every town and tower,

Till all the people cried,

'Splendid is the flower! '


Read my little fable:

He that runs may read.

Most can raise the flowers now,

For all have got the seed.


And some are pretty enough,

And some are poor indeed;

And now again the people

Call it but a weed.