Thursday, October 14, 2021

Book

I turn the page to a new chapter

Round the corner are new words to see

They aren't what I consume

In stead, they consume me


Through my eyes, I emerge

To merge with the black of the ink

Traversing each letter, word

A roller coaster ride in a blink


Desolate deserts, luscious valleys

City streets with a NO ENTRY sign

Through myriad landscapes that greet

Are they the writer's? Are they mine?


Words, like keys to secret locks

Some come easy, some hard to turn

Doors inside doors and more

An ordained journey without return


As long as, in this world of words

I hear the rustle of a single leaf

Outside, in the worldly world

I remain oblivious to joy and grief


And to objects and people that move

To the setting and rising sun's tricks

To rains, sprouts, blooms and withers

To the lonely clock's fervent ticks

Chaos

A part of my being

Craves for harmony

Order, precision,

It demands monotony


The restless ticking

Of the inner clock

In perpetual motion

Set off the dock


My frantic tries

To impose symmetry

On the patterned fabric  

Of innate tapestry


With feigned decreeing 

Of thoughts’ scurry

Slackening them

In a dazed hurry


I halt for a moment

At a faint cry

Of a breath held

Inside a deep sigh


And then, by chance,

I stop being menial

And let go of those

Trapped in denial


To witness the charm

Of chaotic consonance

Randomness of each

Humming in resonance








Wednesday, October 13, 2021

ಆವಿರ್ಭೂತ

 ಶೃಂಗದುತ್ತುಂಗದಾಲಯದ ಶಿವಲಿಂಗದಲಿ

ಭಂಗವಾದರು ಮೆರೆವ ಶಿಲ್ಪಶಿಲೆಯಲ್ಲಿ

ಅಂಗನೆಯ ಕೊರಳೊಡವೆಯಲಿ ಹೊಳೆವ ಮಣಿಯ

ಅಂಗಳದ ಚುಕ್ಕಿ ರಂಗೋಲೆಯಲ್ಲಿ


ಚಂದಿರನ ಬಿಂಬತೋರುವ ಕೊಳದ ತಿಳಿಯಲ್ಲಿ

ಬಂದು ತೀರವ ಸೋಕಿ ತೆರಳುವಲೆಯಲ್ಲಿ

ಕಂದನಳುವಿಗೆ ಮಿಡಿವ ಕಣ್ಣಹನಿಯಲ್ಲವನೆ

ಮಿಂದು ಮೀಯಿಸುತಿರುವ ಬಿರುಮಳೆಯಲಿ


ಕೆಂಪಾಗಿ ತಾನುರಿದು ಅಟ್ಟುತಿಹ ಕೆಂಡದಲಿ

ಸೊಂಪಾದ ಬಿಸಿಲ ಧರೆಗೀವ ರವಿಯಲ್ಲಿ

ತಂಪನೆಯ ತುಂಬುತಿಂಗಳ ಬೆಳಕಿನಲ್ಲವನೆ

ಕಂಪಿಸದ ದೀವಿಗೆ ಜ್ಯೋತಿಯಲ್ಲಿ


ಕಾಣುವುದ ಕಿತ್ತೊಗೆವ ಚಂಡಮಾರುತದಲ್ಲಿ

ಆಣತಿಗೆ ಏರಿಳಿವ ಯೋಗಿಯುಸಿರಲ್ಲಿ

ವೇಣುವಿನೊಳಗೆ ಸುಳಿದುಲಿವ ಗಾಳಿಯಲ್ಲವನೆ

ಪ್ರಾಣವಾಗೆಲ್ಲ ಜೀವಿಗಳೊಡಲಲಿ


ಶತಕೋಟಿ ಬೆಳಕವರ್ಷವ ಮೀರಿದೆಡೆಯಲ್ಲಿ

ಅತಿಸೂಕ್ಷ್ಮ ರೇಣುವಿನ ಪರಿಧಿಯಲ್ಲಿ

ಮತಿಗೆ ನಿಲುಕದ ಜಗದ ವಿಸ್ತಾರದಲ್ಲವನೆ

ಪ್ರತಿಕಣದೊಳಡಗಿರುವ ಶೂನ್ಯತೆಯಲಿ

Sky

The blue canvas is all mine

Inside, I'm mixing colors

Brushstrokes through the window

A blink, moistened lashes


Sometimes it dons grey

Sometimes pink or crimson

The sky knows it all

My joy and apprehension


Tufts of white waft 

From across horizon's streak

Perhaps they're those words

That sky would never speak


Words that ebbed away 

Words that didn't make a start

Words that emerged from a rummage

And only caused the lips to part


And yet we have a conversation

Sky and me, beyond words

It knows why I look out through the window

I know why it dons colours

ಬಾನಾಡಿ

ಪಂಜರದ ಬಾನಾಡಿ ಭವ ಭಾವಗಳ ಬಂದಿ

ಉಸಿರ ಬಲದಿಂದೆಂತೋ ಜೀವಿಸಿಹೆನು

ಹಾತೊರೆಯುತಿದೆ ಜೀವ ನೀ ರೆಕ್ಕೆಯೊಳಹೊಕ್ಕು

ಬಿಡುಗಡೆಯ ಗರಿಗುಸಿರ ತುಂಬುವುದನು


ಓ ಗಾಳಿಯೇ ಬಾನ ನೀಲಿಯನು ನೀ ಸೋಕಿ

ತಾ ನನ್ನ ಬಳಿಗದರ ವಿಸ್ತರವನು

ಶರಧಿಯಲೆಗಳ ದನಿಯ ಕರಗಿಸುತ ನಿನ್ನೊಳಗೆ

ಬಳಿಸುಳಿದು ಮತ್ತುಲಿದು ತಣಿಸೆನ್ನನು


ಮಲೆಗಳೆತ್ತರದ ನಿರ್ಭಾರದನುಭವ ಸಾರ

ಹರಿಸಿಬಿಡು ಇದ್ದಲ್ಲೆ ತೇಲಿಬಿಡುವೆ

ಕಾನ ಬಗೆ ಬಗೆ ಹಸಿರ ಸತ್ವ ಲೇಪವ ತಂದು

ತೀಡಿಬಿಡು ಹೊಸಬಣ್ಣವನ್ನೆ ತಳೆವೆ


ಗರಿದುಂಬಿದಾಸೆಗಳು ನೂರೆಂಟು ಕನಸುಗಳು

ನನ್ನಂತೆ ಸಂಕೋಲೆಗಳ ಮಿತಿಯಲಿ

ಹೊರಳಾಡುತೆನ್ನೆದೆಯ ಹಾಡಾಗಿ ಹೊಮ್ಮಿಹವು

ನಿನ್ನಾಲಿಕೆಯೆ ನನ್ನ ನಲಿವಾಗಲಿ

ಶೂನ್ಯ

ನಾನೆಂಬ ರಿಕ್ತತೆಯ ವ್ಯರ್ಥ ಕೊಡುಗೆಯ ತಂದು

ನಿನ್ನ ಪೂರ್ಣತೆಗೀವ ದಿಟ್ಟತನದಿಂದ

ಬಂದು ನಿಂತಿಹೆ, ನೋಡು, ನಾ ಹಿಡಿದ ಜೋಳಿಗೆಯ

ತುಂಬೆಲ್ಲ ನಿಸ್ಸಾರ, ನಿಸ್ತೇಜ, ಮಂದ


ಬೇಕೊ ಬೇಡವೊ ನಿನಗೆ ನಿನ್ನಡಿಯ ಸೋಕುವುದು

ನಿರ್ವರ್ಣ ನಿರ್ಗಂಧ ಸುಮರಾಶಿ ಬರಡು

ಸೊಗವಿರದ ಯಾವುದೋ ಭಾವಗಳ ಬಸಿಯುತ್ತ

ಹೊಸತು ಚಿಗುರನು ಕಾಯುತಿಹುದೊಡಲ ಕೊರಡು


ನನ್ನ ಮೌನವ ಮಾರ್ದನಿಸಲಿ ನಿನ್ನಿರುವೆಂದು

ಹೊಯ್ದಾಡುತಿದೆ ಮನದಿ ಹಂಬಲಿಕೆ ಹಣತೆ

ಇಲ್ಲದಂತಿರುವ ನನ್ನಿರುವ ನೀನೊಪ್ಪಿದರೆ

ಕಾಣುವೆನು ನಾನಾಗ ಶೂನ್ಯದಲು ಸಮತೆ

Horizon

During moments of intense joy

A whiff of memory distracts me

Reminding me of my destination

The source of all ecstacy


On days when blooms wither

Puffs of gloom bear suspension

I'm drawn to a true dark spot

A dissolution of every emotion


Submerged in experience I remain

I flow with the current, devoid of baits

Epiphanic sparks make me gasp for breath

Out there, the land I belong, waits


I wade to where the course is shallow

I tread on slippery river stones

Across, onto the shore, beyond waters

I reach somehow, I journey forth


From the realm of oblivion, shines a path of light

My airy feet glide on golden beams

To the horizon, to an unfinished dream

A lone bare tree bears witness, or so it seems


ಬೆಳಗು

ನಸುಗೆಂಪ ಚೆಲ್ಲಿಹುದು ಬೆಳಕಿನೆಳೆ ಮೂಡಣಕೆ 

ಬಣ್ಣಗಳ ತೇರೊಂದನೆಳೆದು ನಿಲಿಸಿ

ಕಣ್ಣೆವೆಯ ಚಾಮರದ ಸ್ವಾಗತವ ಕೋರಿಹುದು

ಆಂತರ್ಯ ದೀಪದೋರಣವನಿರಿಸಿ

ಸೇರುತ ದಿಗಂತದಲಿ ನಮ್ಮೀರ್ವರೀ ಬೆಳಕು 

ಬಾನಗಲ ಬೆಳಕಿನೋಕುಳಿಯಾಗಲಿ


ಹಕ್ಕಿಗಳ ಕೊರಳಿಂದ ತೇಲಿ ನಿನ್ನುಲಿ ನನ್ನ

ಸುಪ್ತ ಕರಣಕೆ ದೀಪ್ತಿಕಣವಾಗಲಿ

ಮೃಣ್ಮನದ ಮಾರ್ದವಕೆ ಜೀವಜಲ ಹನಿಯಾಗಿ

ಮೃದ್ಗಂಧ ಸಾರವದು ಹೊಮ್ಮಿ ಬರಲಿ

ಭಾವದೆಳೆಯಲಿ ಸೇರಿ ನುಡಿಮೌಕ್ತಿಕಳೆಲ್ಲ

ನಿನ್ನಲಂಕಾರಮಾಲಿಕೆಯಾಗಲಿ


ಭೂಸ್ಪರ್ಶದಿಂದೆನ್ನ ಪದತಲದಿ ಹೊಸದೊಂದು

ಚೈತನ್ಯದಾಕರ್ಷ ಒಳಸೇರಲಿ

ದಿವ್ಯಪ್ರಕಾಶದಿಂದೂರ್ಧ್ವಗತಿ ಪಡೆಯುತ್ತ 

ನನ್ನ ಮನದುತ್ಕರ್ಷ ತಾನಾಗಲಿ 

ಅರಿವಿನಾಚೆಯ ಲೋಕದಲ್ಲಿ ನಿನ್ನಡಿಹೂವ 

ಸನ್ನಿಧಿಗೆ ನನ್ನಿರುವು ಸುಮವಾಗಲಿ

ಬಂಧ

ತರುವು ನಾನು ಭೂಮಿ ನೀನು

ನೀನೇ ನನ್ನ ಆನಿಕೆ

ಹುಟ್ಟು ಉಳಿವು ನಿನ್ನೊಳಳಿವು

ಎಲ್ಲಾ ನಿನ್ನ ಕಾಣಿಕೆ


ಬೇರು ತೂರಿ ಸಾರ ಹೀರಿ

ಆದೆ ನಾನು ಬದನಿಕೆ

ನನ್ನ ಹಸಿರೆ ನಿನ್ನ ಉಸಿರು

ಘನವು ನಿನ್ನ ಹವಣಿಕೆ


ನಿತ್ಯ ಸತ್ಯ ನಿನ್ನ ಪುಷ್ಟಿ

ತೆರುವುದೇನದಕೆ ಬೆಲೆ

ಇಷ್ಟೇ ನನ್ನ ಸಣ್ಣ ಕೊಡುಗೆ

ಮುರಿದ ಕೊರಡು ತರಗೆಲೆ


ಅವಲಂಬನಸೂತ್ರಕೆ

ಔದಾರ್ಯವು ಹೆಣೆದಿದೆ

ಗಾಢ ಗೂಢವೇನೋ ನಮ್ಮ

ಆಂತರ್ಯವ ಬೆಸೆದಿದೆ


ನಿನ್ನೆಡೆಗೆ

ಬಿಸಿಲ ಝಳಪಿಸುತಿರುವ ದೂರದ ಹಾದಿಯಲಿ

ನೆಳಲ ಕನಸಿನ ನೀರು ದಾಹ ನೀಗಿ

ತಂಗಾಳಿಯದೊಂದೆಲ್ಲೋ ಸುಳಿವು ಬಂದಂತಾಗಿ

ಮುನ್ನಡೆವೆ ನಿನ್ನೆಡೆಗೆ ಮತ್ತೆ


ಬಣ್ಣಗಳ ಚಿತ್ತಾರ ಮಾಯೆ ಭಿತ್ತಿಯ ಸೆಳವ

ಮೀರಲಾರದೆ ಅಲ್ಲೇ ಕದಡಿ ಹೋಗಿ

ಬಣ್ಣ ಮೆತ್ತದ ಬಿಳಿಯನೆಲ್ಲೋ ಕಂಡಂತಾಗಿ

ಮುನ್ನಡೆವೆ ನಿನ್ನೆಡೆಗೆ ಮತ್ತೆ


ಮಬ್ಬ ತೆರೆ ಸೆರೆಯಲ್ಲಿ ಬೆಳಕಿರಲು ಮರೆಯಲ್ಲಿ

ಸುರಿಯಲಾರದೆ ಸೋನೆ ಹೆಪ್ಪುಗಟ್ಟಿ

ಮಿಂಚಿ ಹೋಗುವ ಹೊಳಪಿನಂಚು ಸಿಕ್ಕಂತಾಗಿ

ಮುನ್ನಡೆವೆ ನಿನ್ನೆಡೆಗೆ ಮತ್ತೆ


ಏನೋ ಹೇಳುವ ಭರದಿ ಪದಗಳಷ್ಟನು ಕೂಡಿ

ಅರ್ಥ ಲೇಪದ ವ್ಯರ್ಥ ಸಾಹಸದಲಿ

ಪದಗಳಂಕುಶ ಮೀರಿ ಭಾವ ಹರಿದಂತಾಗಿ

ಮುನ್ನಡೆವೆ ನಿನ್ನೆಡೆಗೆ ಮತ್ತೆ

ಇರುಳುದಾವರೆ

 


ಇಳಿಸಂಜೆ ಬಾನಲ್ಲಿ ಬಣ್ಣಗಳ ಉತ್ಸವದ

ಮರೆಯಲ್ಲಿ ನಿರ್ವರ್ಣ ಏಕಾಂತವೊಂದು

ಸುಳಿವಾಗ ರಜನಿಯೆಳೆಯೆಳೆಯಾಗಿ ಮೃದುವಾಗಿ

ಸಂಭ್ರಮಿಸುತಿದೆ ಕೃಷ್ಣಕಂಪಲ್ಲಿ ಮಿಂದು


ತರುವಿನಾಸರೆಯಿಂದ ಮರೆಯಾಗಿ ಹಾರಿದರೂ

ಹಿಂಬಾಲಿಸಿದೆ ಹಕ್ಕಿಯ ಗೂಡ ಬಂಧ

ಆ ಬೆಚ್ಚನೆಯ ನೆಲೆಯ ಮತ್ತೆ ಸೇರುವೆವೆನುತ

ಸೆಳವಿನೆಡೆ ನುಗ್ಗುತ್ತಿದೆ ಖಗವಾಣಿವೃಂದ


ಬೆಳಕೆಂಬ ಸಾಂತ ಸುವಿಹಾರ ಚಾಂಚಲ್ಯದಲಿ

ವ್ಯಸ್ತ ಮನವಿನ್ನರಸಲಿ ನ್ಯಸ್ತ ಮುದವ

ಕಣ್ಮುಚ್ಚಿನಲಿ ಹೊಕ್ಕು ಅಮಿತ ನಿಶೆಯಿನಿ ಕಪ್ಪು

ತೆರೆಯಿಸಲಿ ಇರುಳುದಾವರೆಯರಳ ಕದವ


ಎದೆಹೂವು

 ಎದೆಹೂವು ನಲಿವಾಗ

ಸೊದೆಪೂರ ಹರಿವಾಗ

ಬಂದು ಏತಕೊ ಶಂಕೆ ಕಾಡುತಿಹುದು

ನಗೆಯ ಹಿಂದೆಯೆ ಅವಿತು ನೋಡುತಿಹುದು


ಎತ್ತರದ ಗಿರಿ ಮುಕುಟ

ಚುಂಬಿಸಿರೆ ಬಾನ ಪಟ

ಮುಗಿಲೇಕೊ ಮತ್ಸರವ ತೋರುವಂತೆ

ಬೆಳಕ ಮರೆಸುತ ಮಬ್ಬ ಕಾರುವಂತೆ


ಮಾಮರದ ಮರೆಯಲ್ಲಿ

ಕೋಗಿಲೆಯ ದನಿಯಲ್ಲಿ

ಹಾಡೊಂದು ಅರೆಯಾಗಿ ಮುಗಿಯುವಂತೆ 

ಅಳುಕೊಂದು ಕಂಠವನು ಬಿಗಿಯುವಂತೆ


ನಿಲ್ಲುತಿದೆ  ಅಡಿಗಡಿಗೆ 

ಮಾತುಗಳ ಮೆರವಣಿಗೆ

ಭಾವನೌಕೆಗೆ ಉಸಿರು ಸಾಲದಾಗಿ

ತೀರದಲೆ ಉಳಿದಿಹುದು ಮೌನವಾಗಿ  


ಪ್ರಕ್ಷುಬ್ಧ ಕಿರಣಗಣ

ಬೇಡಿದೆ ಅನಾವರಣ

ಸಾರ್ಥಕ್ಯದೊಲು ಮೂಡಿ ಬಂದು ಹರಸು

ಸಾಂಗತ್ಯದೊಲು ಕೂಡಿ ಬಂದು ನೆಲೆಸು

ಕೋರಿಕೆ

 ಮಣ್ಣ ಮೇಲಿನ ಗೆರೆಯ ಮಾರ್ಗದಲಿ ಹುಳುವಾಗಿ

ಬಿಟ್ಟು ನನ್ನನು ದಿಕ್ಕು ತಪ್ಪಿಸಿದಿರು

ಸಿಕ್ಕುದಾರಿಯಲಿ ದಿಗ್ಭ್ರಾಂತಿಯಲಿ ತಡವರಿಸಿ

ಬಿದ್ದೆದ್ದು ನಾ ನಡೆಯೆ ಅಣಕಿಸದಿರು


ನಾ ಕಲಿತ ಅಕ್ಷರವ ಹೋಲದಂತಾವುದೋ

ಗೀಚಿರುವ ಗೌಪ್ಯ ಬಗೆಯುವುದು ಹೇಗೆ

ಮಿಂಚಿಸುತ ಸುಳಿವನ್ನು ಮರುಚಣವೆ ಮರೆಮಾಚಿ

ಬೀಸಿರುವೆ ನನ್ನೆದುರು ಚಳಕ ಸೋಗೆ


ಅನುಕಂಪದೆಲರಾಗಿ ನಸುವಾಗಿ ನಿನ್ನೊಗಟ

ಜಾಟಿಲ್ಯದಿಂದೆನ್ನ ಮೇಲೇರಿಸು

ನಿನ್ನ ಮಾರುತದಳವಿನನುಭಾವಿ ಗಿರಿಯಾಗ್ರ

ವೀಕ್ಷಣೆಯ ಯೋಗದಲಿ ನನ್ನನಿರಿಸು


ಅಂತರಾರ್ಥವಿಹೀನ ಬರಿದೆ ನುಲಿವಿನ ಲೇಖ

ನಲುಗಿಸಿದೆ ಎದೆಯ ತನ್ನುರುಲಿನಲ್ಲಿ

ಆಲಿಂಗಿಸೆನ್ನ ತೋಯಿಸು ಜೀವದಾಕುಲವ

ಒಡಲಿನಾಳದ ನಾದದಮೃತದಲ್ಲಿ


ಜ್ವಲಿತ

ಬಣ್ಣಬಣ್ಣದಿ ಮಿಂದು ನಲ್ಮೆಯನು ತಳೆಯುವೆನು

ಜಗದ ಕಣ್ತುಂಬುವೆನು ಹೂವಾಗಿ ಅರಳಿ

ಸುಳಿಗಾಳಿಗೀಯುವೆನು ನನ್ನೆಲ್ಲ ಕಂಪನ್ನು

ಕಾಯುವೆನು ಜಾರಿಹೋಗಲು ಭುವಿಗೆ ಮರಳಿ


ಪದವಾಗಿ ಮುದವಾಗಿ ಹದವಾಗಿ ಮೂಡುವೆನು

ಮನಗಳಲಿ ಏರಿಳಿವ ಭಾವದಲೆಯಾಗಿ

ಮೋದ ಉನ್ಮಾದಗಳ ಹಾಡಿನಾಲಿಕೆಯಾಚೆ

ಕಾಯುವೆನು ಹಿನ್ನೆಲೆಯ ಮಂದ ಶ್ರುತಿಯಾಗಿ


ದಿನದ ದಣಿವಲ್ಲಿ ಗೆಲುವಲ್ಲಿ ಛಲದಲ್ಲೆಲ್ಲ

ಸಿಲುಕುವೆನು ನಾನೆಂಬ ದುಸ್ತರದ ಬಲೆಗೆ

ತಿಮಿರದಾಲಿಂಗದಲಿ ಕಳೆದು ನನ್ನೆಲ್ಲವನು

ಕಾಯುವೆನು ಕರಗಿಹೋಗಲು ಶೂನ್ಯದೊಳಗೆ


ಬಾ ದಿವ್ಯವೇ ತೋರು ಮೂರ್ತರೂಪವನೊಮ್ಮೆ

ಮರ್ತ್ಯತೆಯ ಹಂಬಲಿಕೆಗಾಗು ನೀನಮೃತ

ನಿನ್ನ ಕಣ್ಬೆಳಕ ಹೊನಲಿನ ಹೊನ್ನ ಹಾದಿಯಲಿ

ಮಾಡಿಬಿಡು ಈ ಧೂಳಕಣವನ್ನು ಜ್ವಲಿತ


ಬಿಂಬ

 ನೀ ನನ್ನೊಳಿಹೆಯೆಂಬ ಸಾಂತ್ವನವೆ ಸಾಕೆನಗೆ

ತೊರೆದುಬಿಡುವೆನು ನಿನ್ನ ಹಂಬಲವನು

ಎಲ್ಲೋ ಮರೆಯಾಗಿರುವೆ ಕಾಣಲಾರದೆ ದೂರ

ನಿನ್ನ ನೆನಪಲೆ ನಿನ್ನ ತುಂಬಿರುವೆನು


ನಿನ್ನ ಮೆಚ್ಚಿಸಬೇಕು ಎಂಬ ಹಠವಿನ್ನಿಲ್ಲ 

ಹಾವ ಭಾವಕೆ ಸೂತ್ರಧಾರಿ ನೀನು

ಆದರೂ ನನ್ನಣುವಣುವಿನಲ್ಲು ನೀ ಕರಗಿ

ನನ್ನನಾಳುವ ಪರಿಯ ತೋರಲೇನು?


ಭಾವಗಳ ತಿಳಿನೀರ ಕೊಳದಲ್ಲಿ ಮಿಂದೆದ್ದು 

ಹೊಳೆವೆ ನೀ ಮಣಿಯಂತೆ ಕಣ್ಣ ತುಂಬ

ಆ ಹೊಳಪಿನಲಿ ಮಂದ ಬೆಳಕಿನಲಿ ಬೀಗುವುದು

ನೀನಾಗಿ ಹೋಗಿರುವ ನನ್ನ  ಬಿಂಬ

Twilight

 Don’t blaze o fiery light

Don’t weaken, don’t flout

Don’t burn me to ashes, yet

Don’t turn me inside out


Don’t hasten to shame me

Don’t let my imperfections show

Don’t unearth the hidden ones

Don’t fight me, don’t overthrow


Mellow down, be a soft glow

So you can reveal me no more

Let all my jaggedness remain

Let my pains be washed ashore


Manifest as the sombre twilight

Dissolve all the details, fine

Let only silhouettes remain

Let me, in all my vagueness, shine

Tree

 Encasing in muddy warmth 

Nourishing in her essence

Earth whispers a secret 

A sprout emerges hence


Seed, is seed no more

To change, it deems compliance

Tender stem , cotyledons

Attempt at self reliance


Higher and higher, up and out 

Shoots aspire to sky

Roots go deeper inside

Yearning for primal why


Branches flowers buds and leaves

Do they exist for a reason?

Such bounty from just a seed!

A new show every season!


Summers bedeck with boons

Heavy enough to share

To wither and drop at the altar

In Winters that strip bare


Through ecstasy and despair

Quietude and strife

Whispered again is the secret

Into new seeds of life

Epiphany

 A tender sweet rose allured me with its grace

In its bewitching muse I was caught

My heart remained full with its fragrance and charm

As long as they were all that I sought


I ventured far to seek its possession

It's acquiescence I did surmise

And by that I induced, a hole in my heart

And of fullness, a slow demise


Nature had its way to put me in my place

As I watched the rose meet a bee

Conceding in that moment of epiphany

I trod on the path meant for me

Me

 



I build a castle inside me

And sit in it, aloof

I raise high walls to feel safe

And seal it fully with a roof


I look outside my windows

It's a pity, my vision is blurred

Whatever my pale eyes discern

Is all I can know of the world


The windows are covered in glass

On those I paint my heart

Sometimes magnificent

Sometimes falling apart


The scene outside is colorful

But are those colours true?

The colored panes make it hard

To tell the black from the blue


I have my own set of hues

That I color those panes with

But of what use are those hues

When I can see through their myth?


Yet the desire to paint

Is ruthless and I paint again

I struggle to scrub them off

And yet, the taints remain


Dark nights are the only respite

From colours, or so they seem

For colours are everywhere

In every dream I dream


I dream of a place to go

Beyond my dreams, and free

No castle, no windows, no colours

And no me inside me