Thursday, November 11, 2021

ಅಂತರ್ವಾಣಿ


Someday, you shall part, from all thine

Your heart, soul, shall melt into mine


All fury, countless guises

All rage, ecstasy, shall cease to be

Once effervescent life-blooms 

Shall wilt as death calls on thee


Those eyes that have enticed yours

Cheeks that kisses have sought

Today’s starry dreams, fortunes

All, shall then be, naught


Someday, your heart shall hold just me

Gloom retreating, brilliance shall abide

World shall fade, Love shall rise

Trustful waves unto me shall stride


Original by Kuvempu


ಒಂದಲ್ಲ ಒಂದು ದಿನ ನೀನೆಲ್ಲ ತೊರೆವೆ;

ಒಂದೆದೆಯೊಳೆಮ್ಮನದೊಳೆನ್ನೆದೆಗೆ ಬರುವೆ!


ನೂರು ಆವೇಶಗಳು, ನೂರಾರು ವೇಷಗಳು,

ರೋಷಸಂತೋಷಗಳು ಎಲ್ಲ ಕೊನೆ ಮುಟ್ಟಿ,

ಜೀವನೋದ್ಯಾನದಲಿ ಕುಸುಮವೃಂದದ ಕಾಂತಿ

ಮಸುಳಾಗಿ ಮೃತ್ಯು ಬರೆ ಬಾಗಿಲನು ತಟ್ಟಿ;


ಇಂದು ನಿನ್ನಯ ಕಣ್ಣ ಸೆಳೆವ ಕಣ್ಣುಗಳೆಲ್ಲ,

ಇಂದು ಕೆಂದುಟಿಗಳನು ಕರೆವ ಕೆನ್ನೆಗಳು,

ಇಂದಿನ ಯಶೋಲೋಭ, ಇಂದಿನ ಮಹತ್ಕಾಂಕ್ಷೆ,

ಅಂದೆಲ್ಲ ನಿನಗಹವಿ ಬರಿಯ ಸೊನ್ನೆಗಳು.


ಅಂದು ನನ್ನೊಬ್ಬನನೆ ನೆನೆವೆ ನಿನ್ನೆದೆಯಲ್ಲಿ

ಬೆಳಕ ಹೊಳೆ ಹರಿಯುವುದು ಕತ್ತಲೆಯ ಕೊಚ್ಚಿ;

ಜಗವೆಲ್ಲ ಜಾರುವುದು; ಒಲ್ಮೆ ಮೈದೋರುವುದು;

ಬಾಳ್ವೊನಲು ಹರಿವುದೆನ್ನನೆ ನಚ್ಚಿ ನೆಚ್ಚಿ!






 




No comments:

Post a Comment