ಅಂತರಂಗದ ತರುವ ರೆಂಬೆಯಾಸರೆಯಲ್ಲಿ
ಗರಿದುಂಬಿ ಭರವಸೆಯು ಕುಳಿತು ಹಾಡಿಹುದು
ಪದಗಳಿಲ್ಲದ ಹಾಡು ಬರಿದೆ ಭಾವದ ಮೀಟು
ತಡೆಯಿರದೆ ಸ್ವರವೊಂದು ಕೇಳಿ ಬರುತಿಹುದು
ತನ್ನುಲಿಯ ಮಾಧುರ್ಯವನು ಹರಿಸಿ ಮನಮನಕೆ
ಬೆಚ್ಚನೆಯ ಸಾಂತ್ವನವ ತಾನುಣಿಸುತಿರಲು
ಆ ಪುಟ್ಟ ಬಾನಾಡಿ ಇನ್ನೆಷ್ಟು ನೊಂದಿಹುದೋ
ದನಿಯನಡಗಿಸಿಬಿಡುವ ಬಿರುಗಾಳಿಯಿರಲು
ಶೈತ್ಯೋತ್ಕಟತೆಯಲ್ಲು ಮೂಡುವುದು ಸವಿಗಾನ
ಅಪರಿಚಿತ ಕಡಲಲ್ಲು ತೇಲಿಬಹುದಿಂಪು
ವೈಪರೀತ್ಯದ ಕ್ಲೇಶದೊಳಗೊಮ್ಮೆಯೂ ನನ್ನ
ತೃಣ ಮಾತ್ರವನು ಬಯಸದಿಹುದದರ ಪೆಂಪು
Original by Emily Dickinson
“Hope” is the thing with feathers -
That perches in the soul -
And sings the tune without the words -
And never stops - at all -
And sweetest - in the Gale - is heard -
And sore must be the storm -
That could abash the little Bird
That kept so many warm -
I’ve heard it in the chillest land -
And on the strangest Sea -
Yet - never - in Extremity,
It asked a crumb - of me.
No comments:
Post a Comment