ನಾವಿಕನು ನಾನಾಗಿ ನಾವೆ ಅಲೆಯಲಿ ತೂಗಿ
ಶರಧಿ ಮೇಲಿನ ಪಯಣ ಮುಗಿಯುವಂದು
ಮೊರೆವ ಕಡಲಂಚಿನಲಿ ಮರಳ ವಿಸ್ತರದಲ್ಲಿ
ಮಾಡುವೆನು ನನಗಾಗಿ ನೆಮ್ಮನೊಂದು
ಭೋರ್ಗರೆದು ಹಿರಿದೊಂದು ಉನ್ಮತ್ತ ತೆರೆ ಬಂದು
ತಡಿಯನೊರೆಯುತ ನೊರೆತು ಕರಗುವುದನು
ನೋಡುತಲಿ ಜೀವನದ ಪಾಪಗಳ ಪುಣ್ಯಗಳ
ಉತ್ಕ್ರಮಣ ಪತನಗಳ ಧ್ಯಾನಿಸುವೆನು
ಆಕಾಶದಾಚೆಗಿನ ಸ್ತಬ್ಧ ಶಾಂತಲ ಶ್ಯಾಮ
ತೊನೆವ ಸಾಗರ ನೀಲ ಸೇರುವಲ್ಲಿ
ಬಾನೆತ್ತರಕೆ ಹಾರಿ ಅಮಿತ ಬಯಕೆಯ ಭರದಿ
ಬಾನಾಡಿ ನೀಳ ಗರಿ ಚಾಚುವಲ್ಲಿ
ಭವಕರ್ಮಗಳ ಹೊರೆಯನಿಳಿಸಿ ನಿಟ್ಟುಸಿರಿಟ್ಟು
ಹಾಯಾಗಿ ಹೂವಾಗಿ ಹಗುರಾಗುವೆ
ಕಣ್ಬೆಳಕಿನಂತ ನೀಲಾನಂತ ಕ್ಷಿತಿಜದಲಿ
ಸಂಜೆನೇಸರನಡಿಯೇ ವಿಶ್ರಮಿಸುವೆ
Original by David Block
When my sailing days are over,
And I sail the seas no more,
I shall build myself a refuge
By the oceans murmuring shore.
As I watch the foaming breakers
When the tide comes rushing in,
I will contemplate my lifetime,
With it's virtues and it's sins.
Where the azure of the heavens
Meets the undulating blue,
Where the sweeping, soaring seagull
Flies it's endless quest for food.
It is there that I would rest,
When my work on Earth is done,
At the endless blue horizon
'Neath the crimson, setting sun.
No comments:
Post a Comment