ನಿನ್ನಭಾವವಿದ್ದ ದಿನಗಳೆನಿತು ನೆಮ್ಮೊಳಿದ್ದವು
ಮನದ ಮನೆಗೆ ಕದಗಳಿರುವ ಕಿಟಕಿ ಬಾಗಿಲಿದ್ದವು
ಎಲ್ಲ ಬಗೆಯ ಹಸಿವುಗಳ ನಿಭಾಯಿಸಿತ್ತು ಕೌಶಲ
ಇತ್ತು ರಿಕ್ತ ಮನದ ಕಹಿಯನೆಂತೊ ಮರೆಯಿಸುವ ಛಲ
ತಿಳಿದ ನೋವೆ ಕಾಡುತಿದ್ದವಾ ಸುದೀರ್ಘ ನಿಶೆಯಲಿ
ಸಂಗ ತೊರೆಯಲೊಲ್ಲ ದುರ್ಗತಿಯದು ನಿರುತ ಬಗಲಲಿ
ಸಾಗುತಿತ್ತು ದುಃಖವಿರದ ದಿನವೆ ಇರದೆ ಜೀವನ
ನಿನ್ನೆಗಳನೆ ಹೋಲುತ್ತಿದ್ದ ನಾಳೆಗಳ ನಿರೀಕ್ಷಣ
ಆಗ ಬಂದೆ ಒಲಿದು ನೀನು ಓ ಶ್ವೇತಮಾಟಕ
ಕನಸುಗಳಿಗೆ ಬರುವ ನಸುಕ ಕಲೆಯನೀವ ಚಿತ್ರಕ
ನನ್ನ ಮುಗಿಲ ಕಪ್ಪಿಗೆಲ್ಲ ದಿವ್ಯ ಕಾಂತಿ ಮೆತ್ತಿದೆ
ನಾನು ಕಂಡು ಕೇಳಿದೆಲ್ಲದರಲಿ ಛಾಪನೊತ್ತಿದೆ
ಇನ್ನು ನಿನ್ನಳವಿನ ತೀರದುರಿಯಲುರಿದು ಬೇಯುವೆ
ನಿನ್ನನುಳಿದ ನರಕವೆಲ್ಲ ಅಲ್ಪವೆಂದು ಸಾರುವೆ
Original by The Inevitable word
How sweetly settled were the years of lack,
A mind with shuttered windows and doors,
A belly that tackled all hungers with knack
And the bitter aftertaste of heart’s loss.
All was known woe in that long night,
Misfortune’s hand that never let go,
Of sorrow life was seldom bereft,
As predictable as past every tomorrow.
And then Thou didst arrive O Wizard White,
Tainting dreams with dawns that could be,
Sullied my black skies with celestial light,
Burned Thy seal in all I could think or see.
O I suffer, suffer the ravenous blaze of Thy proximity,
And declare all hells as temperate besides Thee!!
No comments:
Post a Comment